ಜನವರಿ 31ಕ್ಕೆ"ರಾಜ ರಾಣಿ " ರಿಲೀಸ್ ರಣಧೀರ ನಾಯಕರಾಗಿ ನಟಿಸುವ ಜೊತೆಗೆ ನಿರ್ದೇಶನ ಮಾಡಿರುವ ರಾಜ ರಾಣಿ’ ಸಿನಿಮಾ ಇದೇ ತಿಂಗಳು 31ಕ್ಕೆ ತೆರೆಗೆ ಬರಲಿದೆ. ಇದೊಂದು ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಆಗಿದ್ದು ವಿಜಯ್ ಬಳ್ಳಾರಿ ಹಾಗೂ ನೇತ್ರಾವತಿ ಮಲ್ಲೇಶ್ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇವರೊಂದಿಗೆ ಮಧುಸೂಧನ್, ಲೀಲಾ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಆದಾಗಲೇ ಬಿಡುಗಡೆ ಆಗಿದ್ದು ವೀಕ್ಷಕರ ಮೆಚ್ಚುಗೆ ಗಳಿಸಿದೆ. ಇನ್ನೂ ವಿಶೇಷವೆಂದರೆ ಚಿತ್ರದ ಒಂದು ಹಾಡಿನಲ್ಲಿ ಲೂಸ್ ಮಾದ ಯೋಗಿ ಕೂಡಾ ಕಾಣಿಸಿಕೊಂಡಿದ್ದಾರೆ. “ತಳ ತಳ, ಎಲ್ಲಾ ಕಡೆ ನಿನ್ನ ಹಾಡೇ, ತುಂಬೋಗಿರೆ ನಾಡು ನಾಡೇ, ಏನಿಟ್ಟರೇ ನಿನ್ನ ಕಡೆ, ನಿತ್ಯಾ ಜನ ನಿನ್ನಾ ಎಡೆ..’ ಹಾಡಿನಲ್ಲಿ ಯೋಗಿ ಸ್ಟೆಪ್ ಹಾಕಿದ್ದಾರೆ. ನಿರ್ದೇಶಕ ಕಂ ನಾಯಕ ರಣಧೀರ್ ಈ ಹಿಂದೆ ಪುದಿಯವರುಗಳ್’ ತಮಿಳು ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ ಕನ್ನಡದಲ್ಲಿಯೂ ಮೂರು ಸಿನಿಮಾಗಳಲ್ಲಿ ಅಭಿನಯಿಸಿದ್ದು "ರಾಜ ರಾಣಿ " ಚಿತ್ರದ ಕಥೆ, ಚಿತ್ರಕಥೆ ಸಹ ಇವರೇ ಬರೆದಿದ್ದಾರೆ. ಮಂಡ್ಯ ಮೂಲದ ರಿತನ್ಯಾ ಶೆಟ್ಟಿ ಚಿತ್ರದ ನಾಯಕಿಯಾಗಿದ್ದರೆ ಇನ್ನೊಬ್ಬ ನಾಯಕನಾಗಿ ಜೀವನ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಗಿರಿಜಾ ಲೋಕೇಶ್, ಶೋಭರಾಜ್, ಬಿರಾದಾರ್, ಕಿಲ್ಲರ್ ವೆಂಕಟೇಶ, ಚಂದ್ರಪ್ರಭ , ಗಿರೀಶ್ ಜತ್ತಿ, ಮಂಜುಳಾ ನಾಯ್ಡು, ಭಾಗ್ಯಶ್ರೀ, ಮಲ್ಲೇಶ್. ಎಂ. ಪ್ರದೀಪ್ ಅವಳಿ, ಪ್ರಶಾಂತ್ ಅವಳಿ, ಉಮೇಶ್ ಪುಂಗ, ಅರುಣ್ ಆಚಾರ್ಯ, ಸುಧನ್ ಪ್ರಕಾಶ್, ಚಂದ್ರು.R ಮುಂತಾದವರು ನಟಿಸಿದ್ದಾರೆ. ಸುಧನ್ ಪ್ರಕಾಶ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ 4 ಹಾಡುಗಳು 4 ಫೈಟ್ ಇದೆ. ಬೆಂಗಳೂರು, ಮಾಲೂರು, ಕೋಲಾರ, ಚಿಕ್ಕಮಗಳೂರು, ದೊಡ್ಡಬಳ್ಳಾಪುರ, ಮೈಸೂರು ಊಟಿ,ನಂದಿ ಬೆಟ್ಟ ಇತರೆಡೆಗಳಲ್ಲಿ 84 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆದಿದೆ. ಚಿತ್ರದ ರಿಲೀಸ್ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಕಂ ನಾಯಕ ರಣಧೀರ ಇದೇ ತಿಂಗಳು ಜನವರಿ 31ರಂದು ನಮ್ಮ ಚಿತ್ರ ಬಿಡುಗಡೆ ಆಗಲಿದೆ ದಯಮಾಡಿ ಎಲ್ಲರೂ ಬಂದು ಚಿತ್ರವನ್ನು ನೋಡಿ ನಮ್ಮನ್ನು ಪ್ರೋತ್ಸಾಹಿಸಿ ಮತ್ತು ಆಶೀರ್ವದಿಸಬೇಕೆಂದು ಮನವಿ ಮಾಡಿದರು.
Show more