Info
ಮನರಂಜನೆ, ಮಾಹಿತಿಯ ಪೂರಣ ʼಸುಪ್ರಭಾತʼ ವಾಹಿನಿ
ಪ್ರಸ್ತುತ ಆಗುಹೋಗುಗಳ ಮಾಹಿತಿಯ ಜೊತೆಗೆ, ಮನರಂಜನೆಯನ್ನೂ ನೀಡುವ ಕನ್ನಡದ ಮೊದಲ ವಾಹಿನಿಯಾಗಿ ನಿಮ್ಮ ʼಸುಪ್ರಭಾತʼ ರೂಪುಗೊಳ್ಳುತ್ತಿದೆ. ಇದೊಂದು ದೃಶ್ಯ, ಕಾವ್ಯ, ಶ್ರಾವ್ಯಗಳ ತೋರಣ. ಡಿಜಿಟಲ್ ಮಾಧ್ಯಮದ ಮೂಲಕ ಮನರಂಜನೆ, ಮನೋವಿಜ್ಞಾನ, ಜ್ಯೋತಿಷ್ಯ, ಕೌಟುಂಬಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ, ಚರಿತ್ರೆಯ ವಿಶೇಷ ಘಟನಾವಳಿಗಳನ್ನೂ ನೋಡುಗರಿಗೆ ತಿಳಿಸುವ ಪ್ರಯತ್ನವಿದು.
ಡಿಜಿಟಲ್ ಮಾಧ್ಯಮ ಲೋಕದಲ್ಲಿ ಮೊದಲ ಬಾರಿಗೆ ಹವ್ಯಾಸಿ ಲೇಖಕರು, ಓದುಗರು, ನೋಡುಗರಿಗೂ ಮುಕ್ತ ಅವಕಾಶ ಇಲ್ಲಿದೆ. ಇದರ ಜೊತೆಜೊತೆಗೇ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್ನಲ್ಲಿಯೂ ಸಂಪರ್ಕ ಸಾಧ್ಯ.
ಸುಪ್ರಭಾತ ವಾಹಿನಿ ಭಾವೈಕ್ಯತೆಯ ಅಂಗಣ. ವೈವಿಧ್ಯಮಯ ʼಸುಪ್ರಭಾತ ವಿಶೇಷʼ, ಜಗತ್ತಿನ ಆಗುಹೋಗುಗಳ ಬಗೆಗಿನ ʼವಿಶ್ವ ವಿಚಾರʼ, ನಮ್ಮ ಆಚಾರ-ವಿಚಾರ ಕುರಿತ ʼನಮ್ಮ ಸಂಸ್ಕೃತಿʼ, ʼಮನೋಹರ ಮಾತುʼ, ಜೊತೆಗೆ ಸಂಗೀತ ಕಾರ್ಯಕ್ರಮ, ಬ್ಯುಸಿನೆಸ್, ಶಿಕ್ಷಣ, ಕೃಷಿ, ರಾಜಕೀಯ ವಿಶ್ಲೇಷಣೆ, ಕಾದಂಬರಿ ಆಧಾರಿತ ಕಾರ್ಯಕ್ರಮಗಳು…ಹೀಗೆ ಜನಸಾಮಾನ್ಯರೆಡೆಗೆ ಪಯಣ. ಟೀಂ ಸುಪ್ರಭಾತಕ್ಕಿದೆ ವಿದ್ವಾಂಸರು, ಸಂಶೋಧಕರು, ವಿಷಯ ತಜ್ಞರ ಮಾರ್ಗದರ್ಶನ. ಅತ್ಯುನ್ನತ ತಂತ್ರಜ್ಞಾನ, ನೆಟ್ವರ್ಕಿಂಗ್, ಮಾರ್ಕೆಟಿಂಗ್, ಬ್ರಾಂಡ್ ಬಿಲ್ಡಿಂಗ್ ಪರಿಣಿತರ ಸಮಾಗಮ ಈ ಸುಪ್ರಭಾತ.
Tags
Stats
Joined Invalid Date
0 total views